ಶನಿವಾರ, ಡಿಸೆಂಬರ್ 31, 2011

'ಒಲವಿನ ಹಕ್ಕಿಯ ರೆಕ್ಕೆ ಪುಕ್ಕ '

ಚಿತ್ರ ಹರ್ಷದ ಉದಯ ಕಾಮತ್ 

ಕಾವು ಕಳೆಚಿತು ಬೆಚ್ಚನೆಯ ಭ್ರೂಣ

ತಾಯಿಯ ಮೊಗದಲ್ಲೊಂದು ನಿಶ್ಯಬ್ದದ ಮೌನ..

ಈ ಪುಟ್ಟ ಹಕ್ಕಿಗೋ ಹದವಿರದ ಜ್ಞಾನ ,ಪಿಳ ಪಿಳ
ಕಣ್ಣು ಹಾಯಿಸಿದಲೆಲ್ಲಾ ಕಣ್ ಚುಚ್ಚುವ ಕಿರಣ

ಹಸಿದ ಹೊಟ್ಟೆ ತಲ್ಲಣಗಳ ಗಾಳಿ ಜೋರಾದಗ
ಬಾಯ್ ಬಾಯ್ ಬಿಟ್ಟಿತು ಆ ಮರಿ ಬಳಗ
ತಾಯಿಯ ಹಣೆಯಲ್ಲಿ ಬೆವರಿಳಿಯಿತು ಆಗ

ರೆಕ್ಕೆ ಬಲಿಯಿತು ಪುಕ್ಕ ಕೆದರಿತು ,ಹೊರಗೆಲ್ಲ
ಬೆಳಕು ನಗುವ ಹೂ ತೇರು ಕಂಡಿತು..
ಹಾರಿತಂದು ಗೂಡ ಬಿಟ್ಟು,ಹೊತ್ತು ನೂರು ಕನಸು
ಜಿಗಿದೋಡಿತು,ಹೆತ್ತ ಆ ತಾಯ ಮರೆತು

ಮೊಳಕಾಲಲ್ಲಿ ತಲೆತೂರಿಸಿ ಕುಳಿತಿತ್ತು
ಕತ್ತೆತ್ತಿ ನೋಡಿದ ಮೊಗದಲ್ಲಿ ದಳದಳಿಸುವ ನೀರು
ಕಣ್ಣುಗಳು ಒಳಗಿದ್ದ ಬೊಬ್ಬೆಗಳನ್ನು ಪ್ರತಿಫಲಿಸಿದ್ದವು!
ಯಾತನೆಯ ಮೊತ್ತ ಅಲ್ಲಿ ಉತ್ಪತ್ತಿಯಾದಂತಿತ್ತು

ಗೂಡು ಕಳೆಚಿತ್ತು ಬೆಚ್ಚನೆಯ ಭ್ರೂಣ
ತಾಯಿಯ ಎದೆಯಲ್ಲೊಂದು ನಿಶ್ಯಬ್ದದ ಮೌನ..

ಶುಕ್ರವಾರ, ಡಿಸೆಂಬರ್ 23, 2011

ಬೆಳಕೆ ರೂಪಿಸುತಿದೆ ನಿನ್ನ..

ಚಿತ್ರ ವಿನಾಯಕ್ ಹೆಗಡೆ

ಬೆಳಕೆ    
ರೂಪಿಸುತಿದೆ ನಿನ್ನ ಸಹನೆ ಕವಿತೆಯೊಂದ ಎದೆಯಲಿ | |
ನಿನ್ನಯ ಮೌನ ನನ್ನೆದೆಯ ಆತ್ಮದಲಿ ಪ್ರತಿಧ್ವನಿಸಿ..

ಮೀರಿದ ಆಸೆ ಉಂಟು ನಿನ್ನಲಿ
ಬಿಟ್ಟರೆ ಸುಡಬಲ್ಲೆ ಮನೆಯನ್ನೆ ಕ್ಷಣದಲ್ಲಿ
ಆದರೂ ಕನಿಕರತೆಯ ಕಡಲುಕ್ಕಿ ಹರಿಸುತಿಹೆ,ಅದಾರಿಗಾಗಿಯೋ?
| | ಬೆಳಕೆ ,ರೂಪಿಸುತಿದೆ..                                 

ತಿರುತಿರುಗಿ ಕಾಡುವ ಗಾಳಿಯ ಗದರಿಸಿ
ಹಿಡಿ ಕತ್ತಲ ನುಂಗಿ ಹದರುತಿರುವೆ
ಆದರೂ ಗಾಂಭಿರ್ಯದ ಶ್ರುತಿ ಹಿಡಿದು ಉರಿಯುತಿರುವೆ ,ಅದಾರಸಂಕಲ್ಪಕೋ ?
| | ಬೆಳಕೆ ,ರೂಪಿಸುತಿದೆ..

ನೀ ಸತ್ತರೆ ಅಳುವರಾರಿಲ್ಲ ಇಲ್ಲಿ
ನಾವ್ ಸತ್ತರೆ ನೀನೆ ಬೇಕಂತೆ ಸೂತಕದ ಕೋಣೆಯಲಿ
ಕಾಡದಿರುವುದೇ ಇಂಥ ನಿರುತ್ತರದ ಪ್ರಶ್ನೆಗಳು ನಿನ್ನಲಿ !?
ಆದರೂ ಮೌನದಲಿ ಮೈಮರೆತು ಮಿನುಗುತಿಹೆ ,ಅದಾರುದ್ಧಾರಕೋ?

ಬೆಳಕೆ,
‘ರೂಪಿಸಿದೆ’ ನಿನ್ನ ಸಹನೆ ಕವಿತೆಯೊಂದ ಎದೆಯಲಿ
ನಿನ್ನಯ ಮೌನ ನನ್ನೆದೆಯ ತುಂಬಾ ಪ್ರತಿಧ್ವನಿಸಿ ..

ಕಲಿಸೇ ತಾಯಿ ಈ ನಿನ್ನೆಲ್ಲ ಕಲೆಯ
ಬಿಡಿಸಿ ಬರಬಲ್ಲೆ ಬಿಗಿದೆಲ್ಲ ಸೆಲೆಯ
ಕನಿಕರತೆಯ ಕಡಲಿನೊಳ್ ಮಿಂದು ,ಗಾಂಭಿರ್ಯದ ಗರಡಿಯೊಳ್ ಪಳಗಿಸಿ
ಮೌನದಲಿ ದಹಿಸುವುದ ಕಲಿಸು ತಾಯೆ
ಬಿಡಿಸಿ ಬಂದಿಹೆನು ಬಿಗಿದೆಲ್ಲ ಸೆಲೆಯ..

ರೂಪಿಸಿದೆ ನಿನ್ನ ಸಹನೆ ಕವಿತೆಯೊಂದ ಎದೆಯಲಿ
ನಿನ್ನಯ ಮೌನ ನನ್ನೆದೆಯ ಆತ್ಮದಲಿ ಪ್ರತಿಧ್ವನಿಸಿ..    
                              

ಗುರುವಾರ, ಡಿಸೆಂಬರ್ 22, 2011

'ಸಿಬಿರೋ' 'ಚಿಗುರೋ '..




ಯಾರು ಹೇಗೋ ತಿಳಿದವರಾರು
ಮನ, 'ಸಿಬಿರೋ' 'ಚಿಗುರೋ ' ಬಲ್ಲವರಾರು..
ಯಾರು ಏನೆ ಅನ್ನಲಿ ,ಯಾವ ಹೆಸರೇ ಕರೆಯಲಿ
ನಿಲ್ಲು ಮುದ್ದು ಮನವೆ ,ಸಹನೆ ಗೆಲ್ಲಲಿ !
ಕಾಯುವುದೋ ,ಕಾಡುವುದೋ ಮುಂದೆ ಕನಸಾಗಿ
ಕದಬಡೆದು ಕೇಳುವರಾರು
ಕಣ್ಣು , 'ಕಡಲೋ' 'ಕತ್ತಲೆಯೋ' ಕಂಡವರಾರು..
ಯಾರು ಹೇಗೆ ಇರಲಿ ,ಯಾವ ಹೊನಲೇ ಹರಿಸಲಿ
ತಾಳು ಮುದ್ದು ಮನವೆ ,ತಾಳ್ಮೆ ಗೆಲ್ಲಲಿ..