ಶನಿವಾರ, ಡಿಸೆಂಬರ್ 31, 2011

'ಒಲವಿನ ಹಕ್ಕಿಯ ರೆಕ್ಕೆ ಪುಕ್ಕ '

ಚಿತ್ರ ಹರ್ಷದ ಉದಯ ಕಾಮತ್ 

ಕಾವು ಕಳೆಚಿತು ಬೆಚ್ಚನೆಯ ಭ್ರೂಣ

ತಾಯಿಯ ಮೊಗದಲ್ಲೊಂದು ನಿಶ್ಯಬ್ದದ ಮೌನ..

ಈ ಪುಟ್ಟ ಹಕ್ಕಿಗೋ ಹದವಿರದ ಜ್ಞಾನ ,ಪಿಳ ಪಿಳ
ಕಣ್ಣು ಹಾಯಿಸಿದಲೆಲ್ಲಾ ಕಣ್ ಚುಚ್ಚುವ ಕಿರಣ

ಹಸಿದ ಹೊಟ್ಟೆ ತಲ್ಲಣಗಳ ಗಾಳಿ ಜೋರಾದಗ
ಬಾಯ್ ಬಾಯ್ ಬಿಟ್ಟಿತು ಆ ಮರಿ ಬಳಗ
ತಾಯಿಯ ಹಣೆಯಲ್ಲಿ ಬೆವರಿಳಿಯಿತು ಆಗ

ರೆಕ್ಕೆ ಬಲಿಯಿತು ಪುಕ್ಕ ಕೆದರಿತು ,ಹೊರಗೆಲ್ಲ
ಬೆಳಕು ನಗುವ ಹೂ ತೇರು ಕಂಡಿತು..
ಹಾರಿತಂದು ಗೂಡ ಬಿಟ್ಟು,ಹೊತ್ತು ನೂರು ಕನಸು
ಜಿಗಿದೋಡಿತು,ಹೆತ್ತ ಆ ತಾಯ ಮರೆತು

ಮೊಳಕಾಲಲ್ಲಿ ತಲೆತೂರಿಸಿ ಕುಳಿತಿತ್ತು
ಕತ್ತೆತ್ತಿ ನೋಡಿದ ಮೊಗದಲ್ಲಿ ದಳದಳಿಸುವ ನೀರು
ಕಣ್ಣುಗಳು ಒಳಗಿದ್ದ ಬೊಬ್ಬೆಗಳನ್ನು ಪ್ರತಿಫಲಿಸಿದ್ದವು!
ಯಾತನೆಯ ಮೊತ್ತ ಅಲ್ಲಿ ಉತ್ಪತ್ತಿಯಾದಂತಿತ್ತು

ಗೂಡು ಕಳೆಚಿತ್ತು ಬೆಚ್ಚನೆಯ ಭ್ರೂಣ
ತಾಯಿಯ ಎದೆಯಲ್ಲೊಂದು ನಿಶ್ಯಬ್ದದ ಮೌನ..

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ